ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯು 2024ರ ಸೆಪ್ಟಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮವು ನೀನಾದೆ ನಾ ಕನ್ನಡ ಧಾರಾವಾಹಿಯ ಎರಡನೇ ಭಾಗ ಆಗಿದೆ . ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯನ್ನು ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ ಈ ಧಾರಾವಾಹಿಯನ್ನು 'ಪಿಂಗಾರ ಪ್ರೊಡಕ್ಷನ್' ಸಂಸ್ಥೆ ಮೂಲಕ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ದಿಲೀಪ ಶೆಟ್ಟಿ'' ಮತ್ತು ಖುಷಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. == ಕಥೆ == ಕಥಾ ನಾಯಕ ವಿಕ್ರಂ ರೌಡಿಸಂ ಮಾಡಿಕೊಂಡು, ಕುಡ್ಲದ ಕರುಣಾಕರ ಶೆಟ್ಟಿ ಎಂಬ ಡಾನ್‌ ಬಲಗೈ ಬಂಟನಾಗಿರುತ್ತಾನೆ. ಇತ್ತ ಕಥಾ ನಾಯಕಿ ವೇದಾ ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳು ಆಗಿರುತ್ತಾಳೆ. ಉಡುಪಿ ಕೃಷ್ಣನ ಭಕ್ತೆ ಮತ್ತು ಜೊತೆ ಚಿಕ್ಕದೊಂದು ಬಟ್ಟೆ ಉದ್ಯಮವನ್ನೂ ನಡೆಸುತ್ತಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತೇ? ಎನ್ನುವುದು ಕಥೆ ಮುಂದುವರಿದಂತೆ ತಿಳಿಯಲಿದೆ. == ಹಿನ್ನಲೆ == ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯದಲ್ಲಿ ಕಥೆ ಬದಲಾಗಿದ್ದು, ನೀನಾದೆ ನಾ ಧಾರಾವಾಹಿ ಪಾತ್ರಗಳಾದ ನಾಯಕ ವಿಕ್ರಂ ಹಾಗೂ ವೇದಾ ಇಬ್ಬರೂ ಈ ಧಾರಾವಾಹಿಯಲ್ಲಿ ಮುಂದುವರೆದಿದ್ದಾರೆ. ಕರ್ನಾಟಕದ ದೈವಾರಾಧನೆಯ ತವರೂರಾದ ತುಳುನಾಡಿನಲ್ಲಿ ಈ ಕಥೆ ಆರಂಭವಾಗಿದೆ . == ಪಾತ್ರವರ್ಗ == ==== ಮುಖ್ಯ ಪಾತ್ರಗಳು ==== ದಿಲೀಪ್ ಶೆಟ್ಟಿ: ಕಥಾ ನಾಯಕ ವಿಕ್ರಮ ಪಾತ್ರದಲ್ಲಿ ಖುಷಿ ಶಿವು:ಕಥಾ ನಾಯಕಿಯಾಗಿ ವೇದಾ ಪಾತ್ರದಲ್ಲಿ ==== ಪೋಷಕ ಪಾತ್ರಗಳು ==== ರವಿ ಕಲಾಬ್ರಹ್ಮ: ವೇದಾ ತಂದೆಯಾಗಿ ಶೈಲಶ್ರೀ: ವೇದಾ ತಾಯಿಯಾಗಿ == ಉಲ್ಲೇಖಗಳು == == ಬಾಹ್ಯಕೊಂಡಿಗಳು ==